
1st April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಮಾ.31-ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿರುವ ಕಣವಿ ವೀರಭದ್ರೇಶ್ವರ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರವಿವಾರ ವೈಭವಯುತವಾಗಿ ಜರುಗಿತು.
ಬೆಳಗಿನ ಜಾವ ಶ್ರೀ ವೀರಭದ್ರೇಶ್ವರ ದೇವರಿಗೆ ಮಹಾರುದ್ರಾಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರುತಿ ನಡೆಯಿತು. ಸಾಯಂಕಾಲ ಜನಸಾಗರದ ಹರ್ಷೋದ್ಘಾರದೊಂದಿಗೆ ರಥೋತ್ಸವ ಸಂಭ್ರಮದಿAದ ಜರುಗಿತು. ಭಕ್ತರು ತೇರಿಗೆ ಉತ್ತತ್ತಿ, ಹೂವು, ಹಣ್ಣು ಎಸೆದು ಹರಕೆ ತೀರಿಸಿದರು.
ಬೀಳಗಿ ಕಲ್ಮಠದ ಪೂಜ್ಯ ಗುರುಪಾದ ಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಸದಸ್ಯರುಗಳು, ಕಣವಿ ವೀರಭದ್ರೇಶ್ವರ ಟ್ರಸ್ಟ್ ಮತ್ತು ಜಾತ್ರಾ ಕಮೀಟಿಯ ಸದಸ್ಯರುಗಳು ಸೇರಿದಂತೆ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಏಪ್ರಿಲ್ ಫೂಲ್ ಮಾಡುವ ಬದಲು ಏಪ್ರಿಲ್ ಕೂಲ್ ಮಾಡುವ ವನಸಿರಿ ತಂಡದ ಕಾರ್ಯ ಶ್ಲಾಘನೀಯ....... ಶರಣಬಸಪ್ಪ ಮುಖ್ಯಗುರುಗಳು